ರೋಗಚರಿತ್ರೆ
ಪುರಾತನ ಕಾಲದಿಂದಲೂ ಮಾನವನಿಗೆ ತಿಳಿದಿದ್ದ ಮೇಹ ರೋಗವಿದು. ಚೀನೀಯರಿಗೆ 5,000 ವರ್ಷಗಳ ಹಿಂದೆಯೇ ಇದರ ಬಗ್ಗೆ ಗೊತ್ತಿತ್ತು. ಪ್ರಾಚೀನ ಗ್ರೀಕರಿಗೆ, ರೋಮನರಿಗೆ, ಅರಬ್ಬರಿಗೆ ಇದರ ಪರಿಚಯ ಇತ್ತು. ಆದರೆ ಈ ರೋಗ ಲೈಂಗಿಕ ಸಂಬಂಧವಾದುದು ಎಂಬುದು ಬಹಳ ಕಾಲ ಗೊತ್ತಿರಲಿಲ್ಲ. ಅಲ್ಲದೆ ಇದನ್ನು ಇನ್ನೊಂದು ಬಗೆಯ ಮೇಹರೋಗವಾದ ಸಿಫಿಲಿಸ್ ಎಂಬುದರ ಒಂದು ಬಗೆಯೆಂದು ತಿಳಿಯಲಾಗಿತ್ತು. 1831ರ ಅನಂತರ ಇವೆರಡೂ ಭಿನ್ನ ಬಗೆಯ ರೋಗಗಳೆಂದು ಪತ್ತೆ ಹಚ್ಚಲಾಯಿತು. ಜರ್ಮನಿಯ ವೈದ್ಯ ನೈಸರ್ ಗಾನರೀಯ ರೋಗಕಾರಕ ಕ್ರಿಮಿಯನ್ನು 1884ರಲ್ಲಿ ಕಂಡುಹಿಡಿದ ಅನಂತರ ಈ ರೋಗ ಸಿಫಿಲಿಸ್ ರೋಗದಿಂದ ಭಿನ್ನವಾದುದೆಂದು ಖಚಿತವಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ